ಚಳ್ಳಕೆರೆ:-ಉದ್ಯೋಗ ಖಾತ್ರಿ ಕೆಲಸ ನೀಡುವಂತೆ ಆಗ್ರಹಿಸಿ ದೊಡ್ಡರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಕೂಲಿ ಕಾರ್ಮಿಕರು ಸೋಮವಾರ ನಗರದ ತಾಪಂ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ದೊಡ್ಡೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬೊಮ್ಮಸಮುದ್ರ, ಭರಮಸಾಗರ, ಈ ಗ್ರಾಮದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿಯಡಿಯಲ್ಲಿ ಹೊಸ ಕಾಮಗಾರಿಗಳನ್ನು ಅನುಮೋದನೆ ಮಾಡಿ ಸದರಿ ವರ್ಷದ 100 ದಿನದ ಮಾನವ ದಿನಗಳು ಮುಗಿಯುವವರೆಗೆ ನಿರಂತರವಾಗಿ ಕೆಲಸ ಕೊಡಲು ಮತ್ತು ಕೆಲಸ ಮಾಡಿದ ಕೂಲಿ ಹಣವನ್ನು ವೇಳೆಗೆ ಸರಿಯಾಗಿ ಬಿಡುಗಡೆ ಮಾಡ್ಬೇಕು ಎಂದು ಒತ್ತಾಯಿಸಿದರು.