ಬೆಂಗಳೂರು ಉತ್ತರ: ಸಂಸದ್ ಕ್ರೀಡಾ ಮಹೋತ್ಸವ ಯುವಕರಲ್ಲಿ ಕ್ರೀಡೆ, ಸದೃಢತೆ, ಶಿಸ್ತನ್ನ ಉತ್ತೇಜಿಸುತ್ತೆ: ನಗರದಲ್ಲಿ ಶೋಭಾ ಕರಂದ್ಲಾಜೆ
ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ನಡೆದ ಸಂಸದ್ ಕ್ರೀಡಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪಾಲ್ಗೊಂಡರು, ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಸಂಸದ್ ಕ್ರೀಡಾ ಮಹೋತ್ಸವ ಅಭಿಯಾನದ ಬಗ್ಗೆ ಮಾಡಿದ ಸ್ಪೂರ್ತಿದಾಯಕ ಭಾಷಣದ ನಂತರ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಸಂಸದ್ ಕ್ರೀಡಾ ಮಹೋತ್ಸವವು ಯುವಕರಲ್ಲಿ ಕ್ರೀಡೆ, ಸದೃಢತೆ ಮತ್ತು ಶಿಸ್ತನ್ನು ಉತ್ತೇಜಿಸುವಲ್ಲಿ ಪರಿಣಾಮಕಾರಿಯಾದ ರಾಷ್ಟ್ರೀಯ ವೇದಿಕೆಯಾಗಿ ಹೊರಹೊಮ್ಮಿದೆ. ಆರೋಗ್ಯಕರ ಸ್ಪರ್ಧೆಯ ಮನೋಭಾವವನ್ನು ಬೆಳೆಸುವುದರ ಜೊತೆಗೆ ತಳಮಟ್ಟದ ಪ್ರತಿಭೆಯನ್ನು ಗುರುತಿಸುವ ಮತ್ತು ಪೋಷಿಸುವಲ್ಲಿ ಈ ಕ್ರೀಡಾ ಮಹೋತ್ಸವವು ಪ್ರಮುಖ ಪಾತ್ರ ವಹಿಸುತ್ತವೆ