ಮಹಾತ್ಮ ಗಾಂಧಿಯ ಹೆಸರಿನಲ್ಲಿ ಈಗ ಇರುವವರೆಲ್ಲಾ ನಕಲಿ ಗಾಂಧಿಗಳು, ಇವರು ಮಹಾತ್ಮ ಗಾಂಧಿಯವರ ಹೆಸರನ್ನು ಉಳಿಸಲಿಕ್ಕೆ ಅಲ್ಲ ಅಳಿಸಲಿಕ್ಕೆ ಇದ್ದಾರೆ, ಮಹಾತ್ಮ ಗಾಂಧಿಯರಿಗೂ ಇವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಹೇಳಿದ್ದಾರೆ.ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿಯವರು ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಸಮಯದಲ್ಲಿ ದೇಶವು ಸ್ವರಾಜ್ಯ ಮತ್ತು ಗ್ರಾಮ ಅಭಿವೃದ್ಧಿಯಾಗಬೇಕೆಂಬ ಕನಸು ಕಂಡಿದ್ದರು. ಅದನ್ನು ಇಂದಿನ ಪ್ರಧಾನಿಗಳಾದ ನರೇಂದ್ರ ಮೋದಿಜೀಯವರು ಸಕಾರ ಮಾಡಲು ಮುಂದಾಗಿದ್ದಾರೆ ಆದರೆ ಇದನ್ನು ಸಹಿಸದ ಕಾಂಗ್ರೆಸ್ ನವರು ವಿನಹ ಕಾರಣ ಮೋದಿಜೀಯವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.