ಫೈನಾನ್ಸಿಯರ್ ಮನೋಜ್ ಎಂಬಾತನ ಕಿಡ್ಯಾಪ್ ಮಾಡಿದ್ದ ಕೇಸ್ ನಲ್ಲಿ ಬೇಕರಿ ರಘು ಸೇರಿದಂತೆ ಒಟ್ಟು ಏಳು ಜನರನ್ನ ಬಂಧಿಸಲಾಗಿದೆ ಎಂದು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಶಾಂತಿನಗರದಲ್ಲಿ ಡಿಸಿಪಿ ಹರಿಬಾಬು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡರು. ಫೈನಾನ್ಸಿಯರ್ ಕಮ್ ಉದ್ಯಮಿಯಾಗಿದ್ದ ಮನೋಜ್ ನನ್ನ ಕೆಲ ತಿಂಗಳ ಹಿಂದೆ ಮಹಾಲಕ್ಷ್ಮಿ ಲೇಔಟ್ ಗೆ ಕರೆಸಿ ರಾಜೇಶ್ ಆ್ಯಂಡ್ ಟೀಂ ಕಿಡ್ಯಾಪ್ ಮಾಡಿದ್ದರು. ಹಣಕಾಸು ವ್ಯವಹಾರಕ್ಕಾಗಿ ಕರೆಸಿ ಕಿಡ್ಯಾಪ್ ಮಾಡಿದ್ದ ರಾಜೇಶ್ ಟೀಂ ಮನೋಜ್ ಬಳಿ 50 ಲಕ್ಷ ಕೊಡುವಂತೆ ಹೇಳಿದ್ರು, ಆದ್ರೆ ಹಣ ಕೊಡೋದಕ್ಕೆ ಹಿಂದೇಟಾಕಿದ್ದ ಮನೋಜ್.