ಗ್ಯಾಸ್ ಸಿಲಿಂಡರ್ ಅಳವಡಿಕೆ ವೇಳೆ ಸಿಲಿಂಡರಿನ ನೊಬ್ ಕಿತ್ತು ಸಿಲಿಂಡರ್ ಬ್ಲಾಸ್ಟ್ ಆದ ಘಟನೆ ಇಂದು ಬೆಳಿಗ್ಗೆ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್ ಸ್ಪೋಟದ ತೀವ್ರತೆಗೆ ಮೂರು ಕೊಠಡಿಗಳ ಶೆಡ್ಡು ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ 9 ಜನರಿಗೆ ಗಂಭೀರ ಗಾಯಗಳಾಗಿವೆ. ರಾಜ ಸುರೇಶ, ದುರುಗಪ್ಪ, ಹುಸೇನಮ್ಮ, ನಾಗರಾಜ, ದುರ್ಗಮ್ಮ, ವಿಷ್ಣು, ಶ್ರೀ ಕಾಂತ, ಎಂದು ಗುರುತಿಸಲಾಗಿದ್ದು ಎಲ್ಲರನ್ನೂ ಗಂಗಾವತಿಯ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಡಿ.12,ಶುಕ್ರವಾರ ಮಧ್ಯಾಹ್ನ 12:30ಕ್ಕೆ ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಐವರನ್ನು ಬಳ್ಳಾರಿಯ ಓಪಿಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.