ಪಾವಗಡ: ಮಾದಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಆಡಿಯೋ: ಪತ್ರಕರ್ತನ ವಿರುದ್ಧ ದೂರು ದಾಖಲು
ಪಾವಗಡದಲ್ಲಿ ಮಾದಿಗ ಸಮುದಾಯದ ಕಾಯಕದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆಡಿಯೋ ವೈರಲ್ ಆಗಿದೆ. ಹನುಮಂತನಹಳ್ಳಿ ಗ್ರಾಮದ ಪತ್ರಕರ್ತ ಎಚ್.ವಿ. ರಮೇಶ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಮಾದಿಗ ಮಹಾಸಭಾ ಪದಾಧಿಕಾರಿಗಳು ಪಾವಗಡ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.