ಕೆ.ಜಿ.ಎಫ್: ಕ್ಯಾಸಂಬಳ್ಳಿಯಲ್ಲಿ ಬೋರ್ವೆಲ್ ಕೇಬಲ್ ಕಳವು ಪ್ರಕರಣಗಳಲ್ಲಿ ಓರ್ವ ಆರೋಪಿ ಬಂಧನ, ಮಾಲು ವಶಕ್ಕೆ
KGF, Kolar | Sep 16, 2025 ಕ್ಯಾಸಂಬಳ್ಳಿಯಲ್ಲಿ ಬೋರ್ವೆಲ್ ಕೇಬಲ್ ಕಳವು ಪ್ರಕರಣಗಳಲ್ಲಿ ಓರ್ವ ಆರೋಪಿ ಬಂಧನ, ಮಾಲು ವಶ ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಪೊಲೀಸರು ಬೋರ್ವೆಲ್ ಕೇಬಲ್ ಕಳವು ಪ್ರಕರಣಗಳಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು ರೂ.೯೬,೦೦೦/- ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ೨೦೨೪ ನೇ ಸಾಲಿನಲ್ಲಿ ಕಣ್ಣೂರು ಗ್ರಾಮದ ರಘುರಾಮನಾಯ್ಡು ಮತ್ತು ಶ್ರೀನಿವಾಸಂದ್ರ ಗ್ರಾಮದ ಚಲಪತಿ.ಎಸ್ ರವರ ತೋಟದ ಜಮೀನಿನಲ್ಲಿ ಸುಮಾರು ೬೦೦ ಮೀಟರ್ ಬೋರ್ವೆಲ್ ಕೇಬಲ್ ಕಳ್ಳತನವಾಗಿರುವ ಬಗ್ಗೆ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು. ಕೆ.ಜಿ.ಎಫ್ ತಾಲ್ಲೂಕಿನ ಉದಯನಗರದ ನಿವಾಸಿ ಸುಬ್ರಮ