ಶಿರಸಿ: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಭೈರುಂಬೆ ಗ್ರಾ.ಪಂ ಎದುರು ಬಿಜೆಪಿ ಪ್ರತಿಭಟನೆ
ಶಿರಸಿ : ಬಿಜೆಪಿ ಶಿರಸಿಯ ಗ್ರಾಮೀಣ ಮಂಡಲದ ವತಿಯಿಂದ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಭೈರುಂಬೆ ಗ್ರಾಮ ಪಂಚಾಯತ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಭೈರುಂಬೆ, ಹುಲೇಕಲ್, ಸೋಂದಾ, ಸಾಲ್ಕಣಿ, ಓಣಿಕೇರಿ, ವಾನಳ್ಳಿ ಮತ್ತು ಕೊಡ್ನಗದ್ದೆ ಭಾಗಗಳಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು "ಮೂಡಾ ಹಗರಣದಿಂದ" ಪ್ರಾರಂಭಿಸಿ ಸರಣಿ ಹಗರಣಗಳಲ್ಲಿ ಸಿಲುಕಿದೆ. ಮನೆ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಶಾಸಕರೇ ಮಾತನಾಡಿದ್ದಾರೆ ಎಂದರು.