Public App Logo
Jansamasya
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
Bareilly
Bcci
Agra
Breaking
Aimim
Railway
Bsf
Fatehpur
Meerut
Raebareli
Rain
Kashmir
���ाकिस्तान
Trending
���िवाद

ಶಿರಸಿ: ಮತ್ತೀಘಟ್ಟಾ ಜಲತಾಪದಲ್ಲಿ ಮೃತಪಟ್ಟ ಉಂಚಳ್ಳಿಯ ಯುವಕನ ಕುಟುಂಬಕ್ಕೆ ೫ ಲಕ್ಷ ರೂ ವಿತರಿಸಿದ ಶಾಸಕ ಹೆಬ್ಬಾರ್

Sirsi, Uttara Kannada | Jul 4, 2025
ಶಿರಸಿ : ಇತ್ತೀಚೆಗೆ ಮತ್ತಿಘಟ್ಟ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟ ತಾಲೂಕಿನ ಉಂಚಳ್ಳಿಯ ಪವನ ಜೋಗಿ ಕುಟುಂಬಕ್ಕೆ ೫ ಲಕ್ಷ ರೂ. ಪರಿಹಾರ ಮಂಜೂರಾಗಿದ್ದು, ಶಾಸಕ ಶಿವರಾಮ ಹೆಬ್ಬಾರ್ ಶುಕ್ರವಾರ ಮೃತನ ಮನೆಗೆ ತೆರಳಿ ಆದೇಶ ಪ್ರತಿಯನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಶಿವರಾಮ ಹೆಬ್ಬಾರ್, ಕುಟುಂಬಕ್ಕೆ ನೆರವಾಗಬೇಕಿದ್ದ ಯುವಕ ಇಂತಹ ದುರ್ಘಟನೆಯಲ್ಲಿ ಸಿಲುಕಿರುವುದು ನೋವು ತಂದಿದೆ. ನಾವು ಸಹಾಯ ನೀಡಿದರೂ ಮೃತರನ್ನು ವಾಪಸ್ ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಪರಿಹಾರದ ಹಣ ಶೀಘ್ರವೇ ಬ್ಯಾಂಕ್ ಖಾತೆಗೆ ಜಮಾ ಆಗಲಿದ್ದು, ಸಂಕಷ್ಟದಲ್ಲಿರುವ ಕುಟುಂಬ ಆರ್ಥಿಕವಾಗಿ ಮೇಲೆ ಬರಲಿ ಎಂದರು.