Public App Logo
Jansamasya
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
Bareilly
Bcci
Agra
Breaking
Aimim
Railway
Bsf
Fatehpur
Meerut
Raebareli
Rain
Kashmir
���ाकिस्तान
Trending
���िवाद
Bengal

ಶಿರಸಿ: ಸ್ವರ್ಣವಲ್ಲೀ ಮಠದಲ್ಲಿ ಮೂರನೇ ವರ್ಷದ ಕೃಷ್ಣಯಜುರ್ವೇದಘನ ಪಾರಾಯಣ ಸತ್ರ ಆರಂಭ

Sirsi, Uttara Kannada | Jul 3, 2025
ಶಿರಸಿ : ತಾಲೂಕಿ‌ನ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡ ಒಂಬತ್ತು‌ ದಿನಗಳ ಮೂರನೇ ವರ್ಷದ ಕೃಷ್ಣಯಜುರ್ವೇದಘನ ಪಾರಾಯಣ ಸತ್ರ - 3 ಸ್ವರ್ಣವಲ್ಲೀ ಮಠದಲ್ಲಿ ಗುರುವಾರದಿಂದ ಆರಂಭಗೊಂಡಿದೆ. ಸ್ವರ್ಣವಲ್ಲೀ ಮಹಾಸಂಸ್ಥಾನದ‌ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಮಹಾಸಂಕಲ್ಪವನ್ನು ಕೈಗೊಳ್ಳಲಾಯಿತು. ಶ್ರೀ ಮಠದ ಶಿಷ್ಯ ಭಕ್ತ ಜನರಿಗೆ ಸಕಲ ಕ್ಷೇಮವು, ಸಕಾಲದಲ್ಲಿ ಮಳೆ ಆಗಲಿ, ಧನ ಧಾನ್ಯಗಳು ಸಮೃದ್ಧಿಯಾಗಲಿ, ವಿವಿಧ ವಿಕೃತಿಗಳು ನಿವಾರಣೆಯಾಗಿ ಸಂಸ್ಕೃತಿಯ ಪುನರುತ್ಥಾನವಾಗಲಿ, ಲೋಕವು ಧರ್ಮ ಮಾರ್ಗದಲ್ಲಿ ಸಾಗುವಂತಾಗಲಿ ಎಂದು ನಡೆಸಲಾಯಿತು