ಶಿರಸಿ: ಆಡಳಿತ ಸೌಧದಲ್ಲಿ ಶಾಸಕ ಹೆಬ್ಬಾರ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ : ಮಳೆ ಅನಾಹುತಕ್ಕೆ ಮುಂಜಾಗ್ರತೆ ವಹಿಸಲು ಸೂಚನೆ
ಶಿರಸಿ : ಶಾಸಕ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ನಗರದ ಆಡಳಿತ ಸೌಧದಲ್ಲಿ ಬನವಾಸಿ ಹೋಬಳಿ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆ (ಕೆ.ಡಿ.ಪಿ) ನಡೆಸಿದರು. ಸಭೆಯಲ್ಲಿ ಶಾಸಕರು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಬನವಾಸಿ ಹೋಬಳಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಕುರಿತು ವಿವರವಾದ ಮಾಹಿತಿಯನ್ನು ಪಡೆದುಕೊಂಡರು. ಪ್ರತಿ ಯೋಜನೆಯ ನಿರ್ವಹಣೆ, ಗತಿಸ್ಥಿತಿ ಮತ್ತು ಪೂರ್ಣಗೊಳಿಸುವ ಅವಧಿ ಕುರಿತು ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಉಂಟಾಗಬಹುದಾದ ಯಾವುದೇ ಅಹಿತಕರ ಪರಿಸ್ಥಿತಿಗಳನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸದರು.