ಬೆಂಗಳೂರು ಉತ್ತರ: ಭಾರತದ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ನಿರ್ವಹಣೆಗೆ ಕ್ರಮ: ನಗರದಲ್ಲಿ ರಾಜೇಂದ್ರ ಚೋಳನ್
ಮಾನ್ಯ ಭಾರತದ ಸರ್ವೋಚ್ಛ ನ್ಯಾಯಾಲಯವು ಬೀದಿ ನಾಯಿಗಳ ಹಾವಳಿ ಹಾಗೂ ಬೀದಿ ನಾಯಿಗಳ ನಿರ್ವಹಣೆ ಕುರಿತಾಗಿ ನೀಡಿದ ಆದೇಶದ ಪಾಲನೆ ಹಾಗೂ ಎ.ಬಿ.ಸಿ/ಎ.ಆರ್.ವಿ ಪ್ರಗತಿ ಪರಿಶೀಲನೆ ಕುರಿತು ಮಂಗಳವಾರ ಮಧ್ಯಾಹ್ನ 3:30 ರ ಸುಮಾರಿಗೆ ಬಿ.ಎಂ.ಆರ್.ಡಿ.ಎ ಕಛೇರಿಯಲ್ಲಿ ಎ.ಬಿ.ಸಿ/ಎ.ಆರ್. ಮಾನಿಟರಿಂಗ್ ವಿ ಸಮಿತಿ ಸಭೆಯಲ್ಲಿ ಮಾತನಾಡಿದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಅಧಿಕಾರಿಗಳಿಗೆ ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶಿಸಿದರು.