ಬೆಂಗಳೂರು ಉತ್ತರ: ರಿಯಲ್ ಸ್ಟಾರ್ ಗೆ ಹ್ಯಾಕರ್ ಗಳ ಕಾಟ; ನಗರದಲ್ಲಿ ಅಭಿಮಾನಿಗಳಿಗೆ ಸಂದೇಶ ಕೊಟ್ಟ ಉಪ್ಪಿ
'ರಿಯಲ್ ಸ್ಟಾರ್' ಮೋಸ ಹೋದ್ರಾ..? ನಟ ಉಪೇಂದ್ರಗೆ ಹ್ಯಾಕರ್ ಗಳ ಕಾಟ..! ಹ್ಯಾಕರ್ ಬಲೆಗೆ ಉಪ್ಪಿ ಸುಸ್ತು..! ಅಭಿಮಾನಿಗಳಿಗೆ ಸಂದೇಶ ಕೊಟ್ಟ ರಿಯಲ್ ಸ್ಟಾರ್.. ಹೌದು ದಯವಿಟ್ಟು ಯಾರು ಮೋಸ ಹೋಗಬೇಡಿ ಎಂದು ನಟ ಉಪೇಂದ್ರ ಅವರು ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕತ್ರಿಗುಪ್ಪೆಯ ತಮ್ಮನಿವಾಸದಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ನನಗೂ, ನನ್ನ ಪತ್ನಿ ಪ್ರಿಯಾಂಕಗೆ ಅಪರಿಚಿತ ಕರೆ ಬಂದಿತ್ತು, ಕರೆ ಎತ್ತಿದಕ್ಕೆ ಇಬ್ಬರ ಫೋನ್ ಹ್ಯಾಕ್ ಆಗಿದೆ. ಹಾಗಾಗಿ ಈ ರೀತಿಯ ಅಪರಿಚಿತ ಕರೆಗಳ ಬಗ್ಗೆ ಗಮನ ಇರಲಿ ಎಂದು ಹೇಳಿದ್ದು, ಸದ್ಯ ಪೊಲೀಸ್ ಠಾಣೆಗೆ ದೂರು ಕೊಡಲಿರೋ ಉಪೇಂದ್ರ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಂದೇಶ ಕೊಟ್ಟಿದ್ದಾರೆ.