ಬೆಂಗಳೂರು ಉತ್ತರ: ಹೂಡಿ ಸರ್ಕಲ್ ನಿಂದ – ಹೋಪ್ ಫಾರ್ಮ್ ಜಂಕ್ಷನ್ ವರೆಗೆ ಮಾದರಿ ರಸ್ತೆ ಅಭಿವೃದ್ಧಿ ಪಡಿಸಿ: ನಗರದಲ್ಲಿ ಡಿ.ಎಸ್. ರಮೇಶ್
ಬೆಂಗಳೂರು ಪೂರ್ವ ನಗರ ಪಾಲಿಕೆಯ ಹೂಡಿ ಜಂಕ್ಷನ್ ನಿಂದ ಹೋಪ್ ಫಾರ್ ಹಾಗೂ ಹೂಡಿ ರಸ್ತೆಯಿಂದ ಕುರುಡು ಸೊನ್ನೆಹಳ್ಳಿ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರಾದ ಡಿ.ಎಸ್.ರಮೇಶ್ ಹಾಗೂ ಅಪರ ಆಯುಕ್ತರು ಲೋಖಂಡೆ ಸ್ನೇಹಲ್ ಸುಧಾಕರ್ ರವರು ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಸ್ಥಳ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು. ಹೂಡಿ ಸರ್ಕಲ್ ನಿಂದ – ಹೋಪ್ ಫಾರ್ಮ್ ಜಂಕ್ಷನ್ ವರೆಗಿನ ಪ್ರಸ್ತುತ ರಸ್ತೆ 80 ಅಡಿ ಅಗಲದ ರಸ್ತೆಯನ್ನು 150 ಅಡಿ ಅಗಲದ ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಆದ್ಯತೆ ಮೇಲೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಮುಂದಿನಂತೆ ಅಗತ್ಯ ಸೂಚನೆ ನೀಡಿದರು.