ನಗರದಲ್ಲಿ “ನ್ಯೂಮೋನಿಯಾ ಮುಕ್ತ ಸಮಾಜ” ನಿರ್ಮಾಣಕ್ಕೆ ಕೈಜೋಡಿಸಲು ಜಿಬಿಎ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಸಿರಾಜುದ್ದೀನ್ ಮದನಿ ರವರು ಅಧಿಕಾರಿಗಳಲ್ಲಿ ಮನವಿ ಮಾಡಿದರು. ವಿಶ್ವ ನ್ಯೂಮೋನಿಯಾ ದಿನದ ಅಂಗವಾಗಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಹೆಚ್. ಸಿದ್ದಯ್ಯ ರಸ್ತೆ ರೆಫರಲ್ ಆಸ್ಪತ್ರೆಯಲ್ಲಿ ಮಾಹಿತಿ-ಸಂವಹನ-ಶಿಕ್ಷಣ(IEC) ಚಟುವಟಿಕೆಗಳೊಂದಿಗೆ ನ್ಯೂಮೋನಿಯಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ನ್ಯೂಮೋನಿಯಾ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಗಂಭೀರ ಅಪಾಯವನ್ನು ಉಂಟುಮಾಡುವ ಸೋಂಕಾಕಿದೆ. ಲಸಿಕೆ, ಸ್ವಚ್ಛತೆ, ಉತ್ತಮ ಪೌಷ್ಠಿಕತೆ ಹಾಗೂ ಶೀಘ್ರ ಚಿಕಿತ್ಸೆ ನ್ಯೂಮೋನಿಯಾ ತಡೆಗಟ್ಟುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ತಿಳಿಸಿದರು.