ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಅಬಕಾರಿ ಇಲಾಖೆ ಹಗರಣ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಲ್ಲೇಶ್ವರಂ ನಲ್ಲಿ ಮಾತನಾಡಿ, ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ವರ್ಷದ ಹಿಂದೆಯೇ ಘಟನೆ ನಡೆದಾಗ ತೇಪೆ ಹಚ್ಚಿದ್ರು. ಅಂದೇ ಸಚಿವರನ್ನ ವಜಾ ಮಾಡಬೇಕಿತ್ತು. ಸಿಎಂ ಕೃಪಾ ಕಟಾಕ್ಷದಿಂದ ಇದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತಾಡಿದವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. 60% ಭ್ರಷ್ಟಾಚಾರ ಆರೋಪ ಮಾಡಿದವರು ಕಂಟ್ರಾಕ್ಟರ್ ಗಳು. ಸಿಎಂ ಸಿದ್ದರಾಮಯ್ಯ ಎಷ್ಟು ದಿನ ಇರ್ತೇನೋ, ಇರೋವರೆಗೂ ಚೀಲ ತುಂಬಿಸಿಕೊಳ್ಳೋಣ ಅಂತ ಹೊರಟಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರಿಗಳಿಗೇ ಮಣೆ ಹಾಕ್ತಿದ್ದಾರೆ ಎಂದರು.