ಮಸ್ಕಿ ತಾಲೂಕಿನ ದಿನ್ನಿಭಾವಿ ಗ್ರಾಮದ ನಿವಾಸಿಯಾದ ಬಸಲಿಂಗಮ್ಮ 24 ವರ್ಷದ ಯುವತಿಯು ತನ್ನ ತಾಯಿ ದುರಗಮ್ಮ ಕೌಟುಂಬಿಕ ಬುದ್ಧಿ ಮಾತಿಗಾಗಿ ಬೈದಿದ್ದರಿಂದ ಅದನ್ನು ಮನಸ್ಸಿಗೆ ನೋವುಂಟು ಮಾಡಿಕೊಂಡು ಪಟ್ಟಣದ ಹತ್ತಿರ ಹಾದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆಯ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ 10 ಗಂಟೆಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಆತ್ಮಹತ್ಯೆ ಮಾಡಿಕೊಂಡ ಯುವತಿಯ ತಾಯಿ ಮಸ್ಕಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ನನ್ನ ಮಗಳು ಬಸಲಿಂಗಮ್ಮ ಈಕೆಗೆ ಬೈದಿದ್ದರಿಂದ ಮನಸ್ಸಿಗೆ ಹಚ್ಚಿಕೊಂಡು ಆಕೆಯು ಕಾಲುವೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿನಲ್ಲಿ ಯಾರ ಮೇಲೆಯೂ ಯಾವುದೇ ಅನುಮಾನ ಇರುವುದಿಲ್ಲ ಎಂದು ದೂರು ದಾಖಲಿಸಿದ್ದಾರೆ.