ಮದ್ದೂರು: ಮದ್ದೂರು ನಗರಸಭೆ ಬಳಿ ಗೊರವನಹಳ್ಳಿ ,ಗೆಜ್ಜಲಗೆರೆ, ಚಾಮನಹಳ್ಳಿ ವ್ಯಾಪ್ತಿಯ ಜನರಿಂದ ಗ್ರಾಪಂ ಸೇರ್ಪಡೆ ಪ್ರತಿಭಟನೆ
Maddur, Mandya | Oct 3, 2025 ಮದ್ದೂರು ನಗರಸಭೆಯಿಂದ ತಮ್ಮ ಗ್ರಾಮ ಪಂಚಾಯ್ತಿಗಳನ್ನು ಕೈ ಬಿಡುವಂತೆ ರೈತರು ಸೇರಿ ಪ್ರಗತಿಪರರು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಶುಕ್ರವಾರ ಮಧ್ಯಾಹ್ನ ಪಟ್ಟಣದ ನಗರಸಭೆ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಮದ್ದೂರು ನಗರಸಭೆಗೆ ಗ್ರಾ.ಪಂ.ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಗ್ರಾ.ಪಂ.ಗಳನ್ನಾಗಿ ಉಳಿಸಲು ಒತ್ತಾಯಿಸಿ, ಗೊರವನಹಳ್ಳಿ, ಗೆಜ್ಜಲಗೆರೆ, ಚಾಮನಹಳ್ಳಿ ವ್ಯಾಪ್ತಿಯ ಜನರಿಂದ ಪ್ರತಿಭಟನೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ರಾಜ್ಯ ಸರ್ಕಾರ ಹಾಗೂ ಶಾಸಕರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಪಿಡಿಒ ಗೆ ನಗರಸಭೆಗೆ ಸೇರಿಸಲು ಧಮಕಿ ಹಾಕದಂತೆ ಆಗ್ರಹಿಸಿದರು.ನಗರಸಭೆ ಹೆಸರೇಳಿಕೊಂಡು ಗ್ರಾ.ಪಂ. ಗೆ ಕಾಲಿಟ್ಟರೆ ಗ್ರಾಮಸ್ಥರು ಧರ್ಮದೇಟು ಹಾಕುವುದಾಗಿ ಎಚ್ಚರಿಸಿದರು.