ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಸಿಎಂ ಪ್ರಧಾನಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಲ್ಲೇಶ್ವರಂ ನಲ್ಲಿ ಮಾತನಾಡಿದ ಅವರು, ಎರಡೂ ಸಾಂವಿಧಾನಿಕ ಹುದ್ದೆ, ಯಾರು ಪ್ರಧಾನಿ, ಯಾರು ಸಿಎಂ ಅನ್ನೋದು ಪ್ರಶ್ನೆ ಅಲ್ಲ. ಜನ ಯಾರಿಗೆ ಅಧಿಕಾರ ಕೊಡ್ತಾರೆ, ಅವರು ಅಧಿಕಾರದಲ್ಲಿ ಇರ್ತಾರೆ. ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಭಿನ್ನಾಭಿಪ್ರಾಯ ಸಾಂವಿಧಾನಿಕ ಹುದ್ದೆಗೆ ಅಂತರ ಮಾಡಬಾರದು. ಪ್ರಧಾನಿ ದೇಶಕ್ಕೆ ಕೆಲಸ ಮಾಡ್ತಾರೆ, ಸಿಎಂ ರಾಜ್ಯಕ್ಕೆ. ಇದನ್ನ ರಾಜಕೀಯವಾಗಿ ನೋಡಬಾರದು ಎಂದರು.