ಆರ್.ಎಸ್.ಎಸ್ ಮುಗಿಸುವುದು ತಿರುಕನ ಕನಸು : ಕಾರಹಳ್ಳಿ ಪ್ರತಾಪ್ ಬಂಗಾರಪೇಟೆ : ಪ್ರಿಯಾಂಕ ಖರ್ಗೆ ಅವರು ತನ್ನ ಕ್ಷೇತ್ರದ ಮತ್ತು ಸರ್ಕಾರದ ಪೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಜ್ಯದ ಜನರ ದಿಕ್ಕು ತಪ್ಪಿಸಲು ಬೇರೆ ಮಾರ್ಗ ಕಾಣದೆ ನೂರು ವರ್ಷಗಳ ಇತಿಹಾಸ ಇರುವಂತ ಆರ್.ಎಸ್.ಎಸ್ ಬಲಿಕೂಡಲು ಮುಂದಾಗಿದ್ದಾರೆ ಎಂದು ಹಿಂದು ಮುಖಂಡ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಕಾರಹಳ್ಳಿ ಪ್ರತಾಪ್ ಗುಡುಗಿದರು. ತಾಲ್ಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಐದು ಗ್ಯಾರಂಟಿಗಳ ಘೋಷಣೆಯಿಂದ ರಾಜ್ಯ ಸರ್ಕಾರದ ಕಜಾನೆ ಖಾಲಿಯಾಗಿವುದರಿಂದ ಅಭಿವೃದ್ಧಿ ಶೂನ್ಯವಾಗಿದೆ. ಗುತ್ತಿಗೆದಾರರಿಗೆ ಹಣ ಪಾವತಿಸಲು ಹೆಣಗಾ