ಮೂಡಲಗಿ: ನಾಗನೂರ ಪಟ್ಟಣದಲ್ಲಿ ಸಾಲಬಾಧೆಗೆ ಬೇಸತ್ತು ನೇಕಾರ ಆತ್ಮಹತ್ಯೆ
ನಾಗನೂರ ಪಟ್ಟಣದಲ್ಲಿ ಸಾಲಭಾದೆಗೆ ಬೇಸತ್ತು ನೇಕಾರ ಆತ್ಮಹತ್ಯೆ. ನಾಗನೂರ ಪಟ್ಟಣದ ರಮೇಶ ಮರಿಜಾಡರ (37) ಎಂಬ ನೇಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಮೇಶ ನೇಕಾರಿಕೆ ಹಾಗೂ ಉದ್ಯೋಗಕ್ಕಾಗಿ ಕೈಗಡ ಸಾಲ ಹಾಗೂ ಖಾಸಗಿ ಫೈನಾನ್ಸ್ ಗಳಲ್ಲಿ ಸಾಲ ಮಾಡಿದ್ದರು. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲಬಾಧೆಯಿಂದ ಬೇಸತ್ತು ಗುರುವಾರ ನೇಕಾರನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದಲ್ಲಿ ನಡೆದಿದೆ