ಮದ್ದೂರು: ನಾಲೆಗೆ ನೀರುಬಿಡುವಂತೆ ಆದೇಶಿಸಿರುವ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನೆ: ಭಾರತೀನಗರದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ ರಾಮಲಿಂಗೇಗೌಡ
Maddur, Mandya | Sep 18, 2025 ಲೋಕಸರ ಬ್ರಾಂಚ್ನ ಕೊನೆಭಾಗದ ರೈತರಿಗೆ ಕರ್ನಾಟಕ ರಾಜ್ಯ ರೈತಸಂಘ ನೀರು ಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಮೇರೆಗೆ ಸೆ.19 ರ ಶುಕ್ರವಾರ ನಾಲೆಗೆ ನೀರು ಬಿಡುಗಡೆಯಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ರಾಮಲಿಂಗೇಗೌಡ ತಿಳಿಸಿದರು. ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಕೆ.ರಾಮಲಿಂಗೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ವಿಸಿ ನಾಲೆಯಲ್ಲಿ ನೀರು ಬಾರದೆ ರೈತರು ಕಂಗಾಲಾಗಿದ್ದರು. ನಾಲೆಗೆ ನೀರು ಬಿಡುವುದರ ಬಗ್ಗೆ ನಿರಂತರವಾಗಿ ಚಳುವಳಿಗಳು ಸಹ ನಡೆಸಲಾಗಿತ್ತು. ಆದರೂ ಸಹ ಏನು ಪ್ರಯೋಜನವಾಗದ ಕಾರಣ ಗಗನಚುಕ್ಕಿ ಜಲಪಾತೋತ್ಸವಕ್ಕೆ ಆಗಮಿಸುತ್ತಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂದು ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತ