ಗುರುವಾರ ಸಂಜೆ 5:10 ರ ಸುಮಾರಿಗೆ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯಂದು ನಗರದ ಗವಿಪುರದ ಗವಿಗಂಗಾಧರೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸುವ ಪವಿತ್ರ ಘಳಿಗೆ ನಡೆದಿದ್ದು . ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಸೂರ್ಯನ ಬೆಳಕು ನೇರವಾಗಿ ದೇವಸ್ಥಾನದ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಮಾಡಿದ್ದು, ಸುಮಾರು 6 ನಿಮಿಷ 6 ಸೆಂಕೆಂಡ್ ಗಳ ಕಾಲ ಶಿವಲಿಂಗವನ್ನ ಸೂರ್ಯ ರಶ್ಮಿ ಸ್ಪರ್ಶಿಸಿದೆ. ಈ ಐತಿಹಾಸಿಕ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥನದ ಬಳಿ ಬಂದಿದ್ದು, ದೇವಾಲಯದ ಹೊರಾಂಗಣದಲ್ಲಿ ಭಕ್ತರು ಪವಿತ್ರ ಘಳಿಗೆಯನ್ನ ವೀಕ್ಷಿಸಲು ಎಲ್ಇಡಿ ಸ್ಕ್ರೀನ್ ಗಳನ್ನ ಆಳವಡಿಸಲಾಗಿತ್ತು.