ಹನೂರು: ತಾಲ್ಲೂಕಿನ ದಂಟಳ್ಳಿ ಸಮೀಪ ಹರಿಯುವ ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆ ಕಲ್ಪಿಸಲು ಒತ್ತಾಯಿಸುತ್ತಾ ವಡಕೆಹಳ್ಳ ಗ್ರಾಮದಲ್ಲಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆ, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ಧರಣಿ ನಿರತ ಸ್ಥಳಕ್ಕೆ ಆಗಮಿಸಿ ರೈತರಿಗೆ ಹಿಂದೆ ಸರಿಯುವಂತೆ ಮನವಿ ಮಾಡಿದರು ರೈತರು ಮಾತನಾಡಿ, "ಕಾವೇರಿನ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಯೋಜನೆಗೆ ಅನುಮತಿ ನೀಡಬೇಕು. ಯೋಜನೆ ಜಾರಿಯಾದರೆ ಕೌದಳ್ಳಿ, ಕುರಟ್ಟಿಹೊಸೂರು, ಶೆಟ್ಟಳ್ಳಿ, ಮಾರ್ಟಳ್ಳಿ, ಹೂಗ್ಯಂ ಸೇರಿದಂತೆ ಹಲವಾರು ಗ್ರಾಮಗಳಿಗೆ ನೀರಿನ ಲಭ್ಯತೆ ಹೆಚ್ಚುತ್ತದೆ. ಕೆರೆ-ಕಟ್ಟೆಗಳು ತುಂಬಿಕೊಳ್ಳುತ್ತವೆ, ಅಂತರ್ಜಲ ಮಟ್ಟ ಸುಧಾರಿಸುತ್ತದೆ, ಕೃಷಿ ಉತ್ಪಾದನೆ ವೃದ್ಧಿಯಾಗುತ್ತದೆ ಎಂದರು