ಹನೂರು ತಾಲೂಕಿನ ಗೋಪಿನಾಥಂ–ಹೊಗೆನಕಲ್ ಮಾರ್ಗದ ರಸ್ತೆಯಲ್ಲಿ ತೀವ್ರ ಗುಂಡಿಗಳು ಉಂಟಾಗಿ ಸಂಚಾರ ದುಸ್ತರವಾಗಿರುವುದರಿಂದ ಸಾರ್ವಜನಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಸಮಸ್ಯೆಯನ್ನು ಮನಗಂಡ ಹೊಗೆನಕಲ್ ಫಾಲ್ಸ್ನ ಅಂಬಿಗರ ತಂಡ ಸ್ವಯಂಪ್ರೇರಿತವಾಗಿ ಮುಂದಾಗಿ, ರಸ್ತೆಯಲ್ಲಿ ಉಂಟಾಗಿದ್ದ ದೊಡ್ಡ ದೊಡ್ಡ ಗುಂಡಿಗಳನ್ನುಮುಚ್ಚುವ ಕಾರ್ಯ ಕೈಗೊಂಡಿದ್ದಾರೆ. ಗೋಪಿನಾಥಂನಿಂದ ಹೊಗೆನಕಲ್ಗೆ ಹೋಗುವ ಸುಮಾರು 12 ಕಿ.ಮೀ. ರಸ್ತೆ ಬಹುತೇಕ ಭಾಗಗಳಲ್ಲಿ ಗುಂಡಿಗಳಿಂದ ತುಂಬಿದ್ದು, ಪ್ರವಾಸಿಗರು ಸಂಚಾರದಲ್ಲಿ ವಿಳಂಬಕ್ಕೆ ಒಳಗಾಗುತ್ತಿದ್ದರೆ, ಕಾಡಂಚಿನಲ್ಲಿ ವಾಸಿಸುವ ಜನತೆ ಹಾಗೂ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುತ್ತಿದ್ದರು