ಜಮಖಂಡಿ: ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆಗೆ ಸಮೀತಿಗಳ ರಚನೆ, ನಗರದಲ್ಲಿ ಎಸಿ ಶ್ವೇತಾ ಬೀಡಿಕರ್
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿಗೆ ಉಪವಿಭಾಗ ಮಟ್ಟದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ತಾಲೂಕು ಮಟ್ಟದ ಸಮೀತಿಗಳನ್ನು ರಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಸಣ್ಣ ಮಾತನಾಡಿದ ಅವರು, ಉಪವಿಭಾಗ ವ್ಯಾಪ್ತಿಯ ಜಮಖಂಡಿ, ರಬಕವಿ ಬನಹಟ್ಟಿ. ಮುಧೋಳ ಹಾಗೂ ಬೀಳಗಿ ತಾಲೂಕುಗಳಲ್ಲಿ ಸಮೀತಿಗಳನ್ನು ರಚಿಸಲಾಗಿದೆ. ೧೫೦ ಮನೆಗಳಿಗೆ ಒಬ್ಬರಂತೆ ಪ್ರಾಥಮಿಕ ಶಾಲಾಶಿಕ್ಷಕರನ್ನು ಸಮೀಕ್ಷಾ ದಾರರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.