ಅಂಕೋಲ: ಮಾನಸಿಕ ಅಸ್ವಸ್ಥೆಯ ಕಾಲುಗಳ ಮೇಲೆ ಹರಿದ ಟ್ಯಾಂಕರ್: ಗಂಭೀರ ಗಾಯ ಅವರ್ಸಾದಲ್ಲಿ ಘಟನೆ
ಟ್ಯಾಂಕರ್ ಲಾರಿಯೊಂದು ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಹರಿದ ಪರಿಣಾಮ ಮಹಿಳೆ ತೀವ್ರ ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಅವರ್ಸಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ಮಧ್ಯಾಹ್ನ 2.30ರ ವೇಳೆ ಸಂಭವಿಸಿದೆ. ಪ್ರೇಮಾ ಎಂಬ ಮಹಿಳೆಯ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಭೀರ ಗಾಯಗೊಂಡ ಮಹಿಳೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.