ಬೆಂಗಳೂರು ಉತ್ತರ: ದಸರಾ ಯಾವುದೇ ಜಾತಿ ಧರ್ಮದ ಹಬ್ಬವಲ್ಲ ನಾಡಹಬ್ಬ: ನಗರದಲ್ಲಿ ಶಾಸಕ ರಂಗನಾಥ್
ಕುಣಿಗಲ್ ಶಾಸಕ ರಂಗನಾಥ್ ಅವರು, ಬಾನು ಮುಷ್ತಾಕ್ ವಿಚಾರದಲ್ಲಿ ಪಿಐಎಲ್ ವಜಾ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಭಾರತ ದೇಶ ಜಾತ್ಯಾತೀತ ತತ್ವದ ಮೇಲೆ ನಿಂತಿದೆ. ಅಂಬೇಡ್ಕರ್ ಸಂವಿಧಾನಕ್ಕೆ ಇದು ಜಯ ಸಿಕ್ಕಂತೆ. ದಸರಾ ನಾಡ ಹಬ್ಬ ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದಲ್ಲ. ರಾಜ್ಯ ಹೆಚ್ಚಿನ ರೀತಿ ಇದೇ ಮಾರ್ಗದಲ್ಲಿ ಹೋಗಬೇಕು. ಹೈ ಕೋರ್ಟ್ ತೀರ್ಪು ಸ್ವಾಗತಾರ್ಹ. ಅಂಬೇಡ್ಕರ್ ಕೊಟ್ಟ ಸಂವಿಧಾನದದಲ್ಲಿ ಯಾವುದೇ ಜಾತಿ ಧರ್ಮದ ಆಧಾರದ ಮೇಲೆ ಇಲ್ಲ. ರಾಹುಲ್ ಗಾಂಧಿ ಸಂವಿಧಾನ ಹಿಡಿದುಕೊಂಡೇ ಇರುತ್ತಾರೆ. ಅದನ್ನೇ ನಮ್ಮ ಸರ್ಕಾರ ಪಾಲನೆ ಮಾಡುತ್ತಿದೆ ಎಂದರು.