ಸಾಗರ: ಸಿಗಂದೂರಿನಲ್ಲಿ ಯಾತ್ರಿ ನಿವಾಸ ಪ್ರಾರಂಭಿಸುವಂತೆ ರೈತರ ಮುಖಂಡ ದಿನೇಶ್ ಶಿರಿವಾಳ ಒತ್ತಾಯ
Sagar, Shimoga | Sep 16, 2025 2020 ರಲ್ಲಿ ಸಾಗರ ತಾಲೂಕಿನ ಸಿಗಂದೂರಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಯಾತ್ರಿ ನಿವಾಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಆದರೆ ಕಾರ್ಗಲ್ ವನ್ಯಜೀವಿ ವಿಭಾಗದ ಅಧಿಕಾರಿಗಳು ಅರಣ್ಯ ಇಲಾಖೆಯ ಅನುಮತಿ ಪಡೆಯಲು ತಡೆ ಒಡ್ಡಿದ ಹಿನ್ನೆಲೆ ಯಾತ್ರಿ ನಿವಾಸ ಅನೈತಿಕ ಚಟುವಟಿಕೆಗಳ ಆಗರವಾಗಿದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಯಾತ್ರಿ ನಿವಾಸ ಕಟ್ಟಡವನ್ನ ಪ್ರಾರಂಭಿಸುವಂತೆ ಸಿಗಂದೂರಿನಲ್ಲಿ ರೈತ ಮುಖಂಡ ದಿನೇಶ್ ಶಿರಿವಾಳ ಅವರು ಒತ್ತಾಯಿಸಿದ್ದಾರೆ. ಮಂಗಳವಾರ ರೈತರು ನಿರ್ಮಾಣವಾಗಿರುವ ಕಟ್ಟಡದ ಮುಂದೆ ನಿಂತು ಉದ್ಘಾಟನೆ ಮಾಡುವ ಮೂಲಕ ಅಧಿಕಾರಿಗಳಿಗೆ ಮನವಿ ಮಾಡಿದರು.