ಹುತಾತ್ಮರಾದ ಭಾರತೀಯ ಯೋಧರಿಗೆ ಮೌನಚರಣೆ ಇತ್ತೀಚೆಗೆ ಛತ್ತೀಸ್ಗಡದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹೇಂದ್ರರವರು, ಅನಾರೋಗ್ಯದಿಂದ ಬಸಂತಿರವರು, ದೀಪಾವಳಿ ಹಬ್ಬದ ಹಿನ್ನೆಲೆ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸುರೇಶ ಹಾಗೂ ಸಂಯುಕ್ತ ಕುಮಾರ್ ರವರು ಸೇರಿದಂತೆ ಒಟ್ಟಾರೆ ನಾಲ್ಕು ಯೋಧರು ಸಾವನ್ನಪ್ಪಿದ್ದು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋಲಾರ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ನಿವೃತ್ತ ಸೈನಿಕರು ಹಾಗೂ ನಾಗರೀಕರು ಮೌನಚರಣೆ ಸಲ್ಲಿಸಿದ್ದಾರೆ