ಬೆಂಗಳೂರು ಉತ್ತರ: ಸಿದ್ದರಾಮಯ್ಯ ಅವರಿಗೆ ವೀರಶೈವ ಲಿಂಗಾಯತ ಸಮಾಜದ ಇತಿಹಾಸ ತಿಳಿದಿದೆ: ನಗರದಲ್ಲಿ ವಿ.ಸೋಮಣ್ಣ
ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ಮಂಗಳವಾರ ಮಧ್ಯಾಹ್ನ 3:15 ರ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ಸಿದ್ದರಾಮಯ್ಯನವರಿಗೆ ವೀರಶೈವ ಲಿಂಗಾಯತ ಇತಿಹಾಸದ ಬಗ್ಗೆ ಗೊತ್ತಿದೆ. ಆದರೂ ಕೂಡ ದೊಡ್ಡ ಷಡ್ಯಂತ್ರ ಮಾಡಿ ನಮ್ಮ ಸಮಾಜವನ್ನು ಕಾವಲು ದಾರಿಯಾಗಿ ಮಾಡಿದ್ದಾರೆ. ಧಾರ್ಮಿಕವಾಗಿ, ಸಾಮಾಜಿಕವಾಗಿ ಸಂಸ್ಕಾರದ ಜೀವನ ನಡೆಸಲು ಸಾಕಷ್ಟು ಒತ್ತು ಕೊಟ್ಟಿದೆ ನಮ್ಮ ಸಮಾಜ. ಹೀಗಾಗಿ ಇದೆಲ್ಲದರ ಬಗ್ಗೆ ಇಂದು ನಾವು ಚರ್ಚೆ ಮಾಡಿದ್ದೇವೆ. ಏನು ನಿರ್ಧಾರ ಎಂಬುದನ್ನು ನಮ್ಮ ರಾಜ್ಯಾಧ್ಯಕ್ಷರು ಹೇಳ್ತಾರೆ ಎಂದರು.