ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಅವರು ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಧಾನಸೌಧದ ಬಳಿ ಮಾಧ್ಯಮಗಳ ಜೊತೆ ಗೋ ಬ್ಯಾಕ್ ಗವರ್ನರ್ ವಿಚಾರದ ಕುರಿತು ಮಾತನಾಡಿ, ಗೋ ಬ್ಯಾಕ್ ಗವರ್ನರ್ ವಿಚಾರದ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಆಂತರಿಕವಾಗಿ ಯಾವ ಸೂಚನೆಗಳು ಬರುತ್ತವೋ, ಅದನ್ನು ನಾವು ಪಾಲನೆ ಮಾಡುತ್ತೇವೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆ. ರಾಜ್ಯಪಾಲರ ಈ ವರ್ತನೆ ಸಂಪೂರ್ಣವಾಗಿ ಸಂವಿಧಾನ ವಿರೋಧಿ. ರಾಜ್ಯಪಾಲರು ಸಂಪೂರ್ಣ ಭಾಷಣ ಮಾಡದೇ ಇದ್ದರೆ, ದೆಹಲಿಗೆ ಅಡ್ವಕೇಟ್‌ಗಳನ್ನು ಕಳುಹಿಸಿ ಚರ್ಚೆ ಮಾಡಲಾಗುತ್ತಿತ್ತು ಎಂದರು.