ಚಿಕ್ಕಮಗಳೂರು: ಸೋಷಿಯಲ್ ಮೀಡಿಯಾ ಜಾಹೀರಾತು ನಂಬಿ ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕ.! ಸಿಇಎನ್ ಠಾಣೆಯಲ್ಲಿ ಕೇಸ್.!
ಫೇಸ್ಬುಕ್ ನಲ್ಲಿ ಉದ್ಯೋಗ ನೀಡುವುದಾಗಿ ಜಾಹೀರಾತು ಹಾಕಿ ಯುವಕನಿಂದ 2,6,000 ಹಣ ಪಡೆದು ವಂಚನೆ ಮಾಡಿರುವ ಕುರಿತು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಇ ಪದವಿ ಪಡೆದಿರುವ ಯುವಕ ಫೇಸ್ಬುಕ್ ವೀಕ್ಷಿಸುತ್ತಿದ್ದಾಗ ಐಬಿಎಂ ಕಂಪನಿಯಲ್ಲಿ ಜಾಹೀರಾತು ಕೊಡಿಸುವುದಾಗಿ ತಿಳಿಸಿದ ಜಾಹೀರಾತು ಗಮನಕ್ಕೆ ಬಂದಿದೆ. ಜಾಹೀರಾತಿನಲ್ಲಿ ನೀಡಿದ್ದ ಸಂಖ್ಯೆಗೆ ಸಂಪರ್ಕಿಸಿದಾಗ ಸೈಬರ್ ವಂಚಕರು ಹಂತ ಹಂತವಾಗಿ 2,6000 ಹಣವನ್ನ ಪಡೆದು ವಂಚಿಸಿದ್ದಾರೆ.