ವಿಶ್ರಾಂತಿ ನ್ಯಾಯಧೀಶರಾದ ಎನ್ ಎಸ್ ಸಂತೋಷ್ ಹೆಗ್ಡೆ ಚಲ್ದಿಗಾನಹಳ್ಳಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ವಿತರಣೆ ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಿರಿಯ ನ್ಯಾಯವಾದಿಗಳಾದ ದಿವಂಗತ ಮುನಿಸ್ವಾಮಿಗೌಡ ಮತ್ತು ದಿವಂಗತ ರಾಮಾದೇವಿ ರವರುಗಳ ನೆನಪಿಗಾಗಿ ಶುಕ್ರವಾರ ಕಲಿಕಾ ಪರಿಕರಗಳ ವಿತರಿಸಲಾಯಿತು. ವಿಶ್ರಾಂತಿ ನ್ಯಾಯಧೀಶರಾದ ಎನ್ ಎಸ್ ಸಂತೋಷ್ ಹೆಗ್ಡೆ ರವರು ಕಲಿಕಾ ಪರಿಕರಗಳ ವಿತರಿಸಿ ಮಾತನಾಡಿ ನಾನು ಹಲವು ಹುದ್ದೆಗಳನ್ನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಲೋಕಾಯುಕ್ತನಾದ ಬಳಿಕ ಅನೇಕ ಭ್ರಷ್ಟಗಳನ್ನು ಕಂಡೆ, ಇದು ವ್ಯಕ್ತಿಗಳಿಂದ ನಡೆದ ತಪ್ಪಲ್ಲ ಬದಲಿಗೆ ವ್ಯವಸ್ಥೆ ಮತ್ತು