ಚಳ್ಳಕೆರೆ: ಮತದಾರರ ಪಟ್ಟಿಯಲ್ಲಿ ಎಡವಟ್ಟು, ಮತದಾನದಿಂದ ವಂಚಿತರಾದ ವಕೀಲ
ಚಳ್ಳಕೆರೆಯ ಹೆಚ್.ಪಿ.ಪಿ.ಸಿ. ಸರ್ಕಾರಿ ಕಾಲೇಜಿನ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯ ಗೊಂದಲದಿಂದ ವಕೀಲರೊಬ್ಬರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಡಾಟಾ ಎಂಟ್ರಿ ದೋಷದಿಂದ ಹೆಸರು ಮತ್ತು ಕ್ರಮಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ ಎಂದು ವಕೀಲ ಹೆಚ್. ನಾಗರಾಜ್ ಆರೋಪಿಸಿದ್ದಾರೆ.