ಸಿಂದಗಿ: ಬೋರಗಿ ಗ್ರಾಮದಲ್ಲಿ ಸಭಾಭವನ ಕಾಮಗಾರಿ ವೀಕ್ಷಿಸಿದ ಶಾಸಕ ಅಶೋಕ ಮಾನಗೊಳಿ
ಸಿಂದಗಿ ಕ್ಷೇತ್ರದ ಬೋರಗಿ ಗ್ರಾಮದಲ್ಲಿ ನಡೆಯುತ್ತಿರುವ ಹನುಮಾನ್ ಮಂದಿರದ ಸಭಾಭವನ ಕಾಮಗಾರಿಯನ್ನು ಶಾಸಕ ಅಶೋಕ ಮಾನಗೊಳಿ ಪರಿಶೀಲಿಸಿದ್ದಾರೆ. ಇನ್ನೂ ಒಂದು ತಿಂಗಳೊಳಗೆ ಕೆಲಸ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ ಅವರು, ಗ್ರಾಮದ ಮೂಲಭೂತ ಸೌಕರ್ಯಗಳ ಕುರಿತು ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು.