ಶಿವಮೊಗ್ಗ: ನಗರದ ಬಿಎಸ್ಎನ್ಎಲ್ ಮುಖ್ಯ ಕಚೇರಿಯಲ್ಲಿ ನಡೆದ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಿಭಾಗ್ಯದ ಸಂಸದ ಬಿ ವೈ ರಾಘವೇಂದ್ರ
ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಮುಖ್ಯ ಕಚೇರಿಯಲ್ಲಿ ಬುಧವಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನ ಆಯೋಜಿಸಲಾಗಿತ್ತು ಈ ಸಭೆಯಲ್ಲಿ ಸಂಸದ ಬಿ ವೈ ರಾಘವೇಂದ್ರ ಸಹ ಭಾಗವಹಿಸಿದರು. ಸಭೆಯಲ್ಲಿ ಜಿಲ್ಲೆಯಾದ್ಯಂತ ಟವರ್ ಅಳವಡಿಕೆ ಕಾಮಗಾರಿ ಸಾಗಿರುವ ಹಂತದ ಕುರಿತು, ಅಭಿವೃದ್ಧಿಗೆ ಅಗತ್ಯ ಅನುದಾನ ಹಂಚಿಕೆ, ನೂತನ ಟವರ್ ಅಳವಡಿಕೆ ಸಾರ್ವಜನಿಕರಿಂದ ಪ್ರಸ್ತಾವನೆ, ಅರಣ್ಯ ಇಲಾಖೆಯಿಂದ ನೂತನ ಟವರ್ ಅಳವಡಿಕೆಗೆ ತೊಂದರೆ ಉಂಟಾಗಿರುವ ಕುರಿತಾಗಿ ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.