ಕೋಲಾರ: ನಗರದ ಯೋಧರ ಸ್ಮಾರಕದ ಬಳಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ
Kolar, Kolar | Oct 9, 2025 ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಸೂರಜ್ ಸಿಂಗ್ ಗಗನದೀಪ ಸಿಂಗ್ ,ದುರ್ಗೇಶ್ ಕುಮಾರ್ , ದಿಲಿಪ್ ಕುಮಾರ್ ಧಮೆಶ್ವರ್ ರವರ ಭಾವಚಿತ್ರಕ್ಕೆ ಗುರುವಾರ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸ್ವರ್ಣ ಭೂಮಿ ಫೌಂಡೇಶನ್ ಅಧ್ಯಕ್ಷರದ ಶಿವ ಕುಮಾರ್ ಹಾಗೂ ಮಾಜಿ ಯೋಧರಾದ ಜಗನಾಥ್ ರಾವ್ ಕೆ ಜಿ ಚಂದ್ರಪ್ಪ ,ಗಣೇಶ್, ಸುರೇಶ್, ಶ್ರೀಕಾಂತ್,ಅಶ್ವತ್ ನಾರಾಯಣ್ ಗೌಡ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.