ಕೋಲಾರ: ಕೋಲಾರದಲ್ಲಿ ಅದ್ದೂರಿ ವಾಲ್ಮಿಕಿ ಜಯಂತಿ
Kolar, Kolar | Oct 7, 2025 ಮಹರ್ಷಿ ವಾಲ್ಮಿಕಿ ಜಯಂತಿ ಹಿನ್ನಲೆ,ಕೋಲಾರದಲ್ಲಿ ಅದ್ದೂರಿ ವಾಲ್ಮಿಕಿ ಜಯಂತಿಗೆ ಶಾಸಕ ಕೊತ್ತೂರು ಮಂಜುನಾಥ್ ಮಂಗಳವಾರ ಚಾಲನೆ ನೀಡಿದ್ರು.ನಗರದ ವಾಲ್ಮಿಕಿ ವೃತ್ತದಲ್ಲಿ ಚಾಲನೆ ನೀಡಿದ ಶಾಸಕ ಕೊತ್ತೂರು ಮಂಜುನಾಥ್,ನಗರದ ಕಾಲೇಜು ವೃತ್ತದಿಂದ,ಕೋಲಾರದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳ ಜೊತೆ ಮೆರವಣಿಗೆ ನಡೆಯಿತು. ವಾಲ್ಮಿಕಿ ಭಿತ್ತಿ ಚಿತ್ರದ ಟ್ಯಾಬ್ಲೋಗಳು ನಗರದಲ್ಲಿ ಸಂಚಾರ ನಡೆಸಿದವು. ವಿಧಾನಪರಿಷತ್ ಸದಸ್ಯ ಅನೀಲ್ ಕುಮಾರ್ ಸಾಥ್ ನೀಡಿದ್ರು.ವಾಲ್ಮೀಕಿ ಜಯಂತಿಗೆ ಕಲಾತಂಡಗಳು ಮೆರಗು ತಂದವು.ಮೆರವಣಿಗೆ ನಂತರ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿತು.