ಅಕ್ಟೋಬರ್ 23ಕ್ಕೆ ಕಲ್ಬುರ್ಗಿ ಯಲ್ಲಿ ಆರ್ ಎಸ್ ಎಸ್ ಪಥ ಸಂಚಲನ ವಿಚಾರಕ್ಕೆ ಸಂಬಂಧಿಸಿ ರೇಸ್ ಕೋರ್ಸ್ ರಸ್ತೆ ಬಳಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪಥ ಸಂಚಲನ ಮಾಡಲಿ, ಅನುಮತಿ ಪಡೆಯಲಿ, ಈ ಬಾರಿಯ ಪಥ ಸಂಚಲನಕ್ಕೆ ಬಿಜೆಪಿ ನಾಯಕರ ಮಕ್ಕಳ ಬರಬೇಕು. ಗಣೇಶ ವೇಷಧರಿಸಿ ಬಿಜೆಪಿ ನಾಯಕರ ಮಕ್ಕಳು ಕೂಡ ಬರಲಿ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಅವರನ್ನು ಸ್ವಾಗತ ಮಾಡುತ್ತೇನೆ. ಹಿಂದೆ ನನ್ನ ವಿರುದ್ಧ ಪ್ರತಿಭಟನೆಗೆ ಬಂದಿದ್ದ ಬಿಜೆಪಿಗರಿಗೆ ಟಿ ಕಾಫಿ ವ್ಯವಸ್ಥೆ ಮಾಡಿದ್ದೆ. ಈ ಬಾರಿ ಕೂಡ ಬರುವವರಿಗೆ ಟೀ ಕಾಫಿ ವ್ಯವಸ್ಥೆ ಮಾಡುತ್ತೇನೆ ಎಂದು ಟಾಂಗ್ ನೀಡಿದರು.