ಆನೇಕಲ್: ನಾಗನಾಯಕನಹಳ್ಳಿ ಗ್ರಾಮದಲ್ಲಿ ಮರಸೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸಭೆ ಆಯೋಜನೆ. ಗ್ರಾಮಸ್ಥರ ಕುಂದು ಕೊರತೆಗಳ ಚರ್ಚೆ
ಆನೇಕಲ್ ತಾಲೂಕಿನ ಮರಸೂರು ಪಂಚಾಯತಿ ವ್ಯಾಪ್ತಿಯ ನಾಗನಾಯಕನಹಳ್ಳಿ ಗ್ರಾಮದಲ್ಲಿ ಪಂಚಾಯತಿ ವತಿಯಿಂದ ಗ್ರಾಮಸಭೆ ಆಯೋಜನೆ ಮಾಡಲಾಗಿತ್ತು, ಪಂಚಾಯತಿ ಅಧ್ಯಕ್ಷರಾದ ರಮೇಶ್ ರೆಡ್ಡಿ ಗ್ರಾಮ ಸಭೆಗೆ ಚಾಲನೆ ನೀಡಿದರು. ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಭಾಗವಹಿಸಿ ತಮ್ಮ ಗ್ರಾಮಗಳ ಕುಂದು ಕೊರತೆಗಳ ಬಗೆಹರಿಸುವಂತೆ ಮನವಿ ಸಲ್ಲಿಸಿದರು. ಜೊತೆಗೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.