ರೈತರಿಗೆ ನೀಡುವ ನೀರಿನ ವಿಚಾರಕ್ಕೆ ಸಂಬಂಧಿಸಿ ಸಚಿವ ಶಿವರಾಜ್ ತಂಗಡಗಿ ಅವರು ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಇಂದು ಡಿಕೆ ಶಿವಕುಮಾರ್ ಅವರು , ನಾಲ್ಕು ಜಿಲ್ಲೆಯ ಶಾಸಕರು,ರೈತರು,ಅಧಿಕಾರಿಗಳ ಸಭೆ ಮಾಡಿದರು. ಎಲ್ಲ ಶಾಸಕರ,ರೈತರ ಒಪ್ಪಿಗೆ,ಸಲಹೆ ,ಚರ್ಚೆ ಪಡೆಯಲಾಯ್ತು. ಕೇಂದ್ರ ಸರ್ಕಾರದ ಬೋರ್ಡ್ ನಿರ್ಣಯದ ಪ್ರಕಾರ ಎಂಟು ಗೇಟ್ ಸ್ಕ್ರಕ್ ಆಗಿದೆ. ಅದು ಸರಿಮಾಡಬೇಕು ಎಂದು ಹೇಳಿದ್ದಾರೆ. 105 ಟಿಎಂಸಿ ನೀರು ಸ್ಟೋರ್ ಮಾಡಲು ಆಗಲ್ಲ. ಕೇವಲ 80 ಟಿಎಂಸಿ ನೀರು ಹಿಡಿದಿದ್ದಾರೆ. ಎರಡನೇ ಬೆಳೆ ಬೆಳೆಯಲು 60 ಟಿಎಂಸಿ ನೀರು ಬೇಕು. ಈಗ 75 ಟಿಎಂಸಿ ನೀರು ಅಷ್ಟೇ ಇದೆ. ಇದ್ರಲ್ಲಿ 35% ಅಷ್ಟೇ ನಮ್ಮ ಪಾಲು ಎಂದರು.