ಬಂಡೀಪುರ ರಾಷ್ಟ್ರೀಯ ಉದ್ಯಾಯನವ್ಯಾಪ್ತಿಯ ಮದ್ದೂರು ಅರಣ್ಯ ವಲಯದಲ್ಲಿ ಕೇರಳ ರಾಜ್ಯದ ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸುವ ಮೂಲಕ 1.50 ಕೋಟಿ ರೂ.ಮೌಲ್ಯದ ಚಿನ್ನದ ಗಟ್ಟಿ ದೋಚಿದ್ದ ಪ್ರಕರಣದ ಸಂಬಂಧ ಮೂವರು ವ್ಯಕ್ತಿಗಳನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ನ.21ರಂದು ಮಂಡ್ಯದ ಚಿನ್ನದ ವ್ಯಾಪಾರಿಯೊಬ್ಬರಿಂದ ಖರೀದಿ ಮಾಡಿದ್ದ ಚಿನ್ನವನ್ನು ಕೊಂಡೊಯ್ಯುತ್ತಿದ್ದ ಕೇರಳದ ಕ್ಯಾಲಿಕಟ್ನ ವಿನು ಎಂಬುವವರ ಕಾರನ್ನು ಅಡ್ಡ ಗಟ್ಟಿ ಚಿನ್ನ ದೋಚಲಾಗಿತ್ತು. ನಂತರ ದರೋಡೆಕೋರರು ವಿನು ಮತ್ತು ಅವರ ಕಾರು ಚಾಲಕ ಇಬ್ಬರನ್ನು ಮೈಸೂರು-ವೀರಾಜಪೇಟೆ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ನಂತರ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು