ಬೆಂಗಳೂರು ಉತ್ತರ: ಮುಂದಿನ ತಿಂಗಳು ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಆಹ್ವಾನ: ನಗರದಲ್ಲಿ ಕೆ.ಹೆಚ್ ಮುನಿಯಪ್ಪ
ಆಹಾರ ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಅವರು ಸದಾಶಿವನಗರದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಪಿಎಲ್ ಕಾರ್ಡ್ಗಳು ಕರ್ನಾಟಕದಲ್ಲೇ ಹೆಚ್ಚಿದೆ. 75% ಬಿಪಿಎಲ್ ಕಾರ್ಡ್ಗಳು ಕರ್ನಾಟಕದಲ್ಲಿ ಇದೆ. ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಮಾಡೋದು ಅನಿವಾರ್ಯವಾಗಿದೆ. ಅನರ್ಹರು ಕಂಡು ಬಂದ್ರೆ ಕಾರ್ಡ್ ರದ್ದು ಮಾಡಲ್ಲ. ಅವರನ್ನ ಎಪಿಎಲ್ ಕಾರ್ಡ್ಗೆ ಸೇರಿಸಲಾಗುತ್ತೆ. ಅಪ್ಪಿತಪ್ಪಿ ಅರ್ಹರು ಎಪಿಎಲ್ ಗೆ ಹೋದ್ರೆ 24 ಘಂಟೆಯೊಳಗೆ ಅರ್ಜಿ ಹಾಕಿದ್ರೆ ಪಡಿತರ ವಿತರಣೆ ಮಾಡಲಾಗುತ್ತೆ. ಮುಂದಿನ ತಿಂಗಳು ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಆಹ್ವಾನ ಮಾಡ್ತೇವೆ ಎಂದರು.