ಸಿಂದಗಿ: ಸಿಂದಗಿ, ಆಲಮೇಲ ಭಾಗದ ಕಾಲುವೆಗಳಿಗೆ ನೀರು ಹರಿಸಿ: ಅಧಿಕಾರಿಗಳಿಗೆ ಶಾಸಕ ಅಶೋಕ ಮನಗೂಳಿ ಸೂಚನೆ
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಶಾಸಕ ಅಶೋಕ ಮನಗೂಳಿ ಸಭೆ ನಡೆಸಿದ್ದಾರೆ. ಸಿಂದಗಿ, ಆಲಮೇಲ, ತಾಂಬಾ ಕಾಲುವೆಗಳು ಹಾಗೂ ಬಬಲೇಶ್ವರ ಮತ್ತು ಪುರದಾಳ ಕೆರೆಗಳಿಗೆ ಸಮರ್ಪಕ ನೀರು ಒದಗಿಸುವಂತೆ ಸೂಚನೆ ನೀಡಿದ್ದಾರೆ.