ರಾಂಗ್ ಸೈಡ್ ನಲ್ಲಿ ಬಂದು ಬೈಕ್ ಡಿಕ್ಕಿ ಹೊಡದ ಹಿನ್ನೆಲೆ, ಬೈಕ್ ಮತ್ತು ಕಾರು ಚಾಲಕನ ನಡುವೆ ಮಾರಾಮಾರಿ ನಡೆದ ಘಟನೆ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಬೆಂಗಳೂರಿಮ ಕಾಮರಾಜ ರಸ್ತೆ ಬಳಿ ನಡೆದಿದೆ. ಈ ಬಗ್ಗೆ ಕಾರು ಚಾಲಕ ಸಮರ್ಥ್ ಎಂಬುವವರು ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ಇಲಾಖೆ ಮತ್ತಷ್ಟು ಮಾಹಿತಿ ನೀಡುವಂತೆ ಕೇಳಿದೆ. ಬೈಕ್ ಚಾಲಕ ಎಡಗಡೆಯಿಂದ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಪ್ರಶ್ನೆ ಮಾಡಿದಾಗ ಕಾರು ಚಾಲನ ಹಾಗೂ ಬೈಕ್ ಚಾಲಕ ಇಬ್ಬರು ಕೈ ಕೈ ಮಿಲಾಯಿಸಿಕೊಂಡಿದ್ದು. ಈ ಬಗ್ಗೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ದೂರು ದಾಖಲಿಸಿದ್ದಾರೆ.