ಸಾಗರ: ಸಾಗರ ಹೊರತು ಬೇರೆ ಯಾವ ತಾಲೂಕಿನ್ನು ಜಿಲ್ಲೆ ಮಾಡಬಾರದು :ಸಾಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ
Sagar, Shimoga | Nov 4, 2025 ಸಾಗರ ತಾಲೂಕನ್ನ ಪ್ರತ್ಯೇಕ ಜಿಲ್ಲೆ ಆಗಬೇಕು ಎಂದು ಹೋರಾಟಗಾರರು ಹೋರಾಟ ಮಾಡಿದ್ದಾರೆ. ನಾನು ಕೂಡ ಹೇಳಿದ್ದೇನೆ ಜಿಲ್ಲೆ ಮಾಡುವುದಾದರೆ ಸಾಗರವನ್ನೇ ಮಾಡಬೇಕು ಬೇರೆ ಯಾವ ತಾಲೂಕಿಗೂ ಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಈ ಕುರಿತಂತೆ ಸಾಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕುರಿತಂತೆ ನಾನು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ.ಮುಖ್ಯಮಂತ್ರಿಗಳನ್ನ ಭೇಟಿ ಕೂಡ ಆಗಿದ್ದೇನೆ. ಅದಕ್ಕೆ ಮುಖ್ಯಮಂತ್ರಿಗಳು ನಿಮ್ಮಲ್ಲಿ ಯಾವುದೇ ಜಿಲ್ಲೆಯನ್ನು ಮಾಡುವುದಿಲ್ಲ.ಮಾಡುವುದಾದರೆ ಸಾಗರವನ್ನೇ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಎಂದರು.