ಕೋಲಾರ: ಪಶುಪಾಲನೆ ಇಲಾಖೆಯಲ್ಲಿ ಅಕ್ರಮಗಳು ಲೋಕಾಯುಕ್ತ ತನಿಖೆಗೆ ನಗರದಲ್ಲಿ ಕೆ.ಆರ್.ಎಸ್ ಸಂಘಟನೆ ಒತ್ತಾಯ
Kolar, Kolar | Oct 8, 2025 ಪಶುಪಾಲನೆ ಇಲಾಖೆಯಲ್ಲಿ ಅಕ್ರಮಗಳು ಲೋಕಾಯುಕ್ತ ತನಿಖೆಗೆ ಕೆ.ಆರ್.ಎಸ್ ಸಂಘಟನೆ ಒತ್ತಾಯ ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಪಶುವೈದ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕಿ ಅನುರಾಧ ಅವರು ಕೋಟ್ಯಾಂತರ ರುಪಾಯಿಗಳ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ವತಿಯಿಂದ ನಗರದ ಪಶುಪಾಲನೆ ಇಲಾಖೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಚಿಕ್ಕನಾರಾಯಣ ಮಾತನಾಡಿ ಬಡವರು ದಲಿತರ ಅಭಿವೃದ್ಧಿಗಾಗಿ ಇರುವ ಪಶುಪಾಲನೆ ಇಲಾಖೆಯಲ್ಲಿ ಭ್ರಷ್ಟಾ