ಮೌಡ್ಯ ತೊರೆದು ವೈಜ್ಞಾನಿಕ ಮನೋಭಾವ ಬೆಳಸಲು ಸ್ಮಶಾನದಲ್ಲಿ ಮೌಡ್ಯ ವಿರೋಧಿ ಸಂಕಲ್ಪ ದಿನ ಆಚರಿಸಿದ ದಲಿತರು ಮೂಢನಂಬಿಕೆ ಹಾಗೂ ಕಂದಾಚಾರ ತೊರೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಹ ಬಾಳ್ವೆ ನಡೆಸುವ ಕುರಿತು ಜಾಗೃತಿ ಮೂಡಿಸಲು ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ದಲಿತ ಸಂಘಟನೆಗಳ ಸಮ್ಮಿಲನ ಮೌಡ್ಯ ವಿರೋಧಿ ಸಂಕಲ್ಪ ದಿನ ಆಚರಿಸಲಾಯಿತು. ಶನಿವಾರ ಮದ್ಯಾಹ್ನ 2 ಗಂಟೆಯಲ್ಲಿ ನಗರದ ಗಾಂಧೀನಗರದ ರುದ್ರಭೂಮಿಯಲ್ಲಿ ಜಮಾವಣೆಗೊಂಡ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮೌಡ್ಯ ತೊರೆದು ಮದುವೆಯಾದ, ರಾಹುಕಾಲದಲ್ಲಿ ತಾಳಿ ಕಟ್ಟಿದ, ನಾಮಕರಣ ಮಾಡಿದ, ಮು