ರಾಹುಲ್ ಗಾಂಧಿ ಮೈಸೂರಿಗೆ ಬಂದ ವೇಳೆ ಸಿಎಂ, ಡಿಸಿಎಂ ಜೊತೆ ನಡೆದ ಮಾತುಕತೆ ಕುರಿತು ಯಾವುದೇ ಗೊಂದಲ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಕೇವಲ ಕ್ಯಾಶುವಲ್ ಮೀಟಿಂಗ್ ಮಾತ್ರ, ವಿಷಯ ಗಂಭೀರವಾಗಿದ್ದರೆ ಎರ್ಪೋರ್ಟ್ ಒಳಗಡೆ ಸಭೆ ನಡೆಯುತ್ತಿತ್ತು ಎಂದರು. ಇನ್ನು ಇಂದಿನ ವಿಶೇಷ ಸಚಿವ ಸಂಪುಟ ಸಭೆ ಬಗ್ಗೆ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಣ ಕಡಿತ ಮಾಡಿ, ಹೆಸರು ಬದಲಾವಣೆ ಮಾಡಿರುವುದು ಬಡವರಿಗೆ ಮಾಡಿದ ದೊಡ್ಡ ದ್ರೋಹ ಎಂದು ಕಿಡಿಕಾರಿದರು.